ಜನಪದರ ‘ಮಾನಮಿ’
ಮಹಾನವಮಿ ಹಾಗೂ ವಿಜಯದಶಮಿ ಹಬ್ಬವು ಕನ್ನಡ ನಾಡಿನೆಲ್ಲೆಡೆ ‘ದಸರಾ ಹಾಗೂ ಬನ್ನಿ ಹಬ್ಬ’ ಎಂದು ಆಚರಿಸಲ್ಪಡುತ್ತದೆ. ಭಾರತೀಯ ಪರಂಪರೆಯನ್ನು ಅವಲೋಕಿಸಿದಾಗ ಪ್ರತಿಯೊಂದು ರಾಜ್ಯದಲ್ಲಿಯೂ ಮಹಾನವಮಿ ಹಾಗೂ ವಿಜಯದಶಮಿ ಹಬ್ಬದ ಕುರಿತಂತೆ ವಿಶೇಷ ಆಚರಣೆಗಳಿವೆ. ವಿಭಿನ್ನ ನಡೆ-ನುಡಿಗಳಿವೆ. ಭಾರತ ಅನೇಕ ಧರ್ಮಗಳ ನೆಲೆವೀಡು. ವಿವಿಧತೆ ಇದೆ ಆದರೂ ಐಕ್ಯತೆಗೆ ಕೊರತೆಯಿಲ್ಲ. ಧರ್ಮಗಳು ಎಷ್ಟಷ್ಟೆ ಟೊಂಗೆ ಟಿಸಿಲುಗಳನ್ನೊಡೆದು ಜಾತಿಮತಗಳಲ್ಲಿ ಹಂಚಿಹೋಗಿದ್ದರೂ ಜನಪದರ ಜನಪರ ಧರ್ಮದ ವಿಶಾಲ ಪರಿಕಲ್ಪನೆ ಬದಲಾಗಿಲ್ಲ. ಅಂತಹ ಪರಂಪರೆಯ ಜನಪದರು ನಿರೀಶ್ವರವಾದಿಗಳಲ್ಲ. ದೈವದ ಇರುವಿಕೆಯನ್ನು ನಂಬಿದವರು. ಬನ್ನಿ ಮುಡಿಯುವ ದಸರಾ ಹಬ್ಬ ಅಥವಾ ಜನಪದರ ‘ಮಾನಮಿ’ ಸಡಗರದಲ್ಲಿ ಪಾಲ್ಗೊಂಡ ತನ್ನವರ ವರ್ಣನೆಯನ್ನು ಜನಪದ ಗರತಿಯು ಹೀಗೆ ಹಾಡಿದ್ದಾಳೆ.
ಕಣ್ಣು ಮೂಗಿಲೆ ನನ್ನ ಹೆಣ್ಣು ಮಗಳು ಚೆಲುವಿ
ಬಣ್ಣಕ ನನ್ನ ಸೊಸಿ ಚೆಲುವಿ | ದಸರೇಕ
ಬನ್ನಿ ಮುಡಿವಾಗ ಮಗ ಚೆಲುವ |
ರೈತರಿಗೆ ಉತ್ಸಾಹವನ್ನು ತಂದೊಡ್ಡುವ, ವ್ಯಾಪಾರಿಗಳಿಗೆ ನವಚೇತನ ತಂದುಕೊಡುವ, ಅರಸರಿಗೆ ವಿಜಯದ ಸಂಕೇತವಾಗಿರುವ ಹಬ್ಬವೇ ಮಹಾನವಮಿ ಹಾಗೂ ವಿಜಯದಶಮಿ. ಬಡವನಿಂದ ಬಲ್ಲಿದನವರೆಗೆ, ಗುಡಿಸಲಿನಿಂದ ಅರಮನೆವರೆಗೂ ಉತ್ಸಾಹದಿಂದ ಕೂಡಿ ಆಚರಿಸುವ ಹಬ್ಬ. ಇದು ನಾಡಿನ ಜನರಿಗೆ ದಸರಾ ಹಾಗೂ ಬನ್ನಿ ಹಬ್ಬವೆಂದೆ ಚಿರಪರಿಚಿತ. ಈ ಸಂದರ್ಭದಲ್ಲಿ ಬಂಧು-ಬಾAಧವರೆಲ್ಲ ಸೇರಿ ಸಂಭ್ರಮಪಡುತ್ತಾರೆ.
ದಸರೇಕ ತವರೀಗೆ, ಕುಸಲದಿ ನಾಹೋದೆ
ಸೊಸಿ ನೋಡಿ ಕೊಟ್ಟೆ ಹಿಡಿ ಬನ್ನಿ | ಅಣ್ಣಯ್ಯ
ಖುಸಿಲಿಂದ ಬೊಟ್ಟ ಸೊಸಿಗಿಟ್ಟೆ |
ನವರಾತ್ರಿಯ ಆಚರಣೆ
ಜನಪದ ಆಚÀರಣೆಗಳು ಬಹುತೇಕ ದೈವೀ ಆರಾಧನೆಯ ಹಿನ್ನಲೆಯಲ್ಲಿ ಬೆಳೆದುಬಂದವು. ಕೆಲವು ಪೂರ್ಣ ಮನರಂಜನೆಗೆ ಮೀಸಲಾಗಿದ್ದರೆ, ಮತ್ತೆ ಕೆಲವು ಪೂರ್ಣ ಧಾರ್ಮಿಕ ಆಚರಣೆಗಳಾಗಿವೆ. ಅಶ್ವೀಜ ಮಾಸದ ಶುದ್ಧಪಾಡ್ಯಮಿವರೆಗಿನ ಹತ್ತು ದಿನಗಳು ಬಹುಶುಭದಿನಗಳು. ಮೊದಲಿನ ಒಂಭತ್ತು ದಿನಗಳನ್ನೆ ನವರಾತ್ರಿ ಎಂದು ಕರೆಯುವರು. ಈ ದಿನಗಳಲ್ಲಿ ಲಕ್ಷಿö್ಮÃ, ಸರಸ್ವತಿ, ಕಾಳಿ, ದುರ್ಗೆಯರನ್ನು ಉಪಾಸನೆ ಮಾಡಲಾಗುತ್ತದೆ. ಗುಡಿ-ಗುಂಡಾರಗಳಲ್ಲಿ ದೇವಿಯನ್ನು ಪ್ರತಿಷ್ಠಾಪಿಸಿ, ಪುರಾಣಗಳನ್ನು ಹೇಳಲಾಗುತ್ತವೆ. ಮಳೆ, ಬೆಳೆ, ಧನ, ಧಾನ್ಯ, ಸಂಪತ್ತು, ಯಶಸ್ಸು ಪ್ರಾಪ್ತವಾಗಲು ದೇವಿಯನ್ನು ಭಕ್ತಿಯಿಂದ ಆರಾಧಿಸಲಾಗುತ್ತದೆ. ಜನಪದರು ಜ್ಞಾನ, ಐಶ್ವರ್ಯ, ಸಾಹಸ, ಸಂಪತ್ತನ್ನೂ ಅಪೇಕ್ಷಿಸಿ ಶಕ್ತಿದೇವತೆಯನ್ನು ಪೂಜಿಸುತ್ತಾ ಬಂದಿದ್ದಾರೆ.
ಮಹಾನವಮಿಯ ಆಚರಣೆ
‘ನವಮಿ’ ಎಂದರೆ ಒಂಭತ್ತನೇ ದಿನ. ಈ ದಿನದಂದು ದೇವಿಗೆ ಮಹಾಪೂಜೆಯನ್ನು ಕೈಗೊಳ್ಳಲಾಗುತ್ತದೆ. ಘಟ್ಟ ಹಾಕುವ ಪದ್ಧತಿಯೂ ಜನಪದರಲ್ಲಿ ರೂಢಿಯಲ್ಲಿದ್ದು, ಅದು ಕೊನೆಗೊಳ್ಳುವುದು. ಮಹಾನವಮಿಯ ದಿನದಂದೇ. ಈ ಸಂದರ್ಭದಲ್ಲಿ ಮಡಿಯಿಂದ ಬನ್ನಿ ಮರಕ್ಕೆ ತೆರಳಿ ಭಕ್ತಿ ಭಾವವನ್ನು ಅರ್ಪಿಸುತ್ತಾರೆ. ಮಹಾಭಾರತದ ಶಮೀವೃಕ್ಷವೇ ಈ ಬನ್ನಿಮರ. ಬನ್ನಿ ಮರದೆಲೆಗಳನ್ನು ‘ಬಂಗಾರ’ವೆAದು ಪೂಜಿಸುತ್ತಾರೆ. ಜೀವನ ವಿಧಾನವೆಂಬ ನೀತಿ ನಿಯತ್ತಿನ ಬೇಲಿಯನ್ನು ತಮಗೆ ತಾವೇ ವಿಧಿಸಿಕೊಂಡು, ಧರ್ಮಾಧಾರಿತ ಸಮುದಾಯ ರೂಪಿಸಿಕೊಂಡವರು. ಹಳ್ಳಿಗರು ಯಾರಿಗೂ ಅಂಜದ ದೇವರಿಗೆ ಅಂಜುತ್ತಿದ್ದರು. ಧರ್ಮವಂತರಾಗಿ ಬಾಳುತ್ತಿದ್ದರು. ದೈವಕ್ಕೆ ತಲೆಬಾಗಿ ಬದುಕಿದರು. ಇಂತಹ ನಾಡಸಂಸ್ಕೃತಿಗೆ ಪ್ರತಿಕವಾಗಿ ಇಂದಿಗೂ ಜನಪದ ಗೀತೆಗಳು ಸಾಕ್ಷಿಗಳೆನಿಸಿವೆ.
ಬಂಜಿ ಬಾಗಿಲದಾಗ ಬಂಗಾರದೊಳಕಲ್ಲ
ಬAದು ಕುಟ್ಟಾಕ ಸೊಸಿಯಿಲ್ಲ | ಮಹಾನವಮಿ
ಬನ್ನಿ ಮುಡಿಯಾಕ ಮಗನಿಲ್ಲ |
ವಿಜಯದಶಮಿಯ ಆಚರಣೆ
ಬನ್ನಿ ಮುಡಿಯುವ ದಿನವೇ ವಿಜಯದಶಮಿ. ವಿಜಯೋತ್ಸವ ಆಚರಿಸುವ ದಿನ. ಅಜ್ಞಾತವಾಸಕ್ಕೆ ತೆರಳಿದ ಪಾಂಡವರಿಗೆ ಶಮೀವೃಕ್ಷದಿಂದ ಶಸ್ತಾçಸ್ತç ತೆಗೆದುಕೊಂಡು ವಿಜಯೋತ್ಸವ ಆಚರಣೆ ಮಾಡಿದ್ದು ಇದೇ ದಿನ. ಶ್ರೀರಾಮನು ಲಂಕೆಯ ರಾವಣನನ್ನು ದುರ್ಧಿಸಿದ್ದು ಇದೇ ದಿನ. ಅದಕ್ಕಾಗಿ ಉತ್ತರ ಭಾರತದಲ್ಲೆಡೆ ವಿಜಯದಶಮಿಯಂದು ರಾವಣದಹನ ಎಂಬ ವಿಶಿಷ್ಠ ಆಚರಣೆ ರೂಢಿಯಲ್ಲಿದೆ. ಜನರು ಆಚರಿಸುವ ಪ್ರತಿಯೊಂದು ಆಚರಣೆಯ ಹಿನ್ನಲೆಯಲ್ಲಿಯೂ ಯಾವುದಾದರೊಂದು ಸಮಾಜಸುಧಾರಣೆಯ ಅಂಶವಿದ್ದೇ ಇರುತ್ತದೆ. ನಿತ್ಯ ದೇವರನ್ನು ಪೂಜಿಸುತ್ತ ಬಂದ ಜನಪದÀರು. ಹಬ್ಬ-ಹರಿದಿನಗಳಲ್ಲಿ, ಜಾತ್ರೆ-ಉತ್ಸವಗಳಲ್ಲಿ ಮನದುಂಬಿ ಆರಾದಿಸುತ್ತ ಮೈಮರೆವರು. ಪಾಂಡವರ ಕಷ್ಟದ ದಿನಗಳ ಕುರಿತು ಜನಪದರ ಒಡಲನುಡಿಗಳನ್ನು ಈ ಕೆಳಕಂಡAತೆ ಅಭಿವ್ಯಕ್ತಿಸಿದ್ದಾರೆ.
ಕಲ್ಲು ಕಡುಬ ಮಾಡಿ, ಮುಳ್ಳ ಸ್ಯಾಂವಿಗೆ ಮಾಡಿ
ಬನ್ನಿ ಎಲಿಯಾಗ ಎಡೆಮಾಡಿ | ಪಾಂಡವರು
ಬAದು ಹೋಗ್ಯಾರೊ ವನವಾಸೊ |
ಇದೇ ವಿಜಯದಶಮಿಯಂದೇ ವಿಜಯನಗರ ಸಾಮ್ರಾಜ್ಯ ಉದಯವಾಯಿತೆಂದು ಜನಪದರ ತಿಳುವಳಿಕೆ. ಹಂಪೆಯ ಸಮೀಪ ನಿರ್ಮಿತವಾದ ರಾಜ್ಯಕ್ಕೆ ‘ವಿಜಯನಗರ’ವೆಂದು ಅವರು ಕರೆದಿರಬಹುದು. ಅದಕ್ಕೆ ವಿಜಯನಗರದ ಅರಸರು ಬಹುವಿಜೃಂಭಣೆಯಿAದ ವಿಜಯದಶಮಿ ಹಬ್ಬವನ್ನು ಆಚರಿಸುತ್ತಿದ್ದರು. ಅವರಿಗೆ ಕೇವಲ ಹಬ್ಬವಾಗಿರದೆ ನಾಡಹಬ್ಬವಾಗಿತ್ತು. ಅಂದು ನಾಡದೇವಿಯ ತೇರನ್ನು ಎಳೆಯುತ್ತಿದ್ದರು. ಹಳ್ಳಿಗಳ ಮೋಜು ಮಜಲುಗಳೇ ಅಲ್ಲಿ ಅನಾವರಣಗೊಳ್ಳುತ್ತಿದ್ದವು.
ಬನ್ನಿಯ ಗಿಡಹುಟ್ಟಿ, ಹೊನ್ನೀನ ಮಳೆಗರೆದು
ಚೆನ್ನಪಟ್ಟಣಕೆ ಹೊಳೆ ಹರಿದು | ಹಂಪ್ಯಾಗ
ಬಿನ್ನಾಣ ವೀರ ಗುಟ್ಟಾಗಿ |
ಮುಂದೆ ಮೈಸೂರು ಅರಸರು ನಾಡಹಬ್ಬವನ್ನು ಮುಂದುವರೆಸಿಕೊAಡು ಬಂದರು. ಅಲ್ಲದೇ ಮೈಸೂರಿನ ದಸರಾ ಇಂದಿಗೂ ಜಗತ್ತಿನ ತುಂಬೆಲ್ಲ ಪ್ರಸಿದ್ಧಿಯನ್ನು ಪಡೆದಿದೆ. ಇಲ್ಲಿನ ಜಂಬೂಸವಾರಿ ಇಡೀ ಜಗತ್ತೇ ಭಾರತದೆಡೆಗೆ ಗಮನ ಸೆಳೆಯುವಂತೆ ಆಕರ್ಷಣೀಯವೆನಿಸಿದೆ.
ಖಂಡೇ ಪೂಜೆ
ಮನೆಯಲ್ಲಿನ ಯಂತ್ರ, ವಾಹನ, ಪುಸ್ತಕ, ಲೇಖನಿಗಳನ್ನು, ರೈತನು ತನ್ನ ಉಳುಮೆ ಮಾಡುವ ಸಾಧನಗಳನ್ನು ವ್ಯಾಪಾರಿ ತನ್ನ ಸರಕು-ಸಾಮಗ್ರಿಗಳನ್ನು, ಶುಚಿಯಾಗಿ ತೊಳೆದು ಭಕ್ತಿ-ಭಾವದಿಂದ ಪೂಜಿಸುವ ಪೂಜೆಗೆ ಖಂಡೇಪೂಜೆ ಎಂದು ಕರೆಯಲಾಗುತ್ತದೆ. ಹಿಂದೆ ಅರಸರು ಯುದ್ಧದ ತಯಾರಿಗೋಸ್ಕರ ತಮ್ಮಲ್ಲಿನ ಆಯುಧಗಳನ್ನೆಲ್ಲ ಸರಿಪಡಿಸಿ, ಸಿದ್ಧವಾಗಿರಿಸಿಕೊಂಡು ಪೂಜೆ ಮಾಡುತ್ತಿದ್ದರು. ಅದನ್ನೇ ಆಯುಧ ಪೂಜಾ ಎಂದು ಕರೆಯುವರುÀ. ಆಯುಧ ಪೂಜೆಯೇ ಖಂಡೇಪೂಜೆ. ಹೊಸ ಯಂತ್ರ, ಗೃಹಪ್ರವೇಶ, ಹೊಸ್ತಿಲ ಪೂಜೆ, ಪಾಯ ಹಾಕುವುದು ವಾಹನ ಮುಂತಾದವುಗಳನ್ನು ಕೊಂಡುಕೊಳ್ಳಲು ಶುಭದಿನ.
ದೈವ ಸ್ವರೂಪಿ ಶಮೀವೃಕ್ಷ
ಬನ್ನಿಯ ಮರದವ್ವ ಬಾಣಾ ಇಟ್ಯವಿ ತಾಯಿ|
ಯಾರು ಬಂದರು ಕೊಡಬಾರದ| ತಾಯವ್ವ
ಅರ್ಜುನ ಬಂದರ ಕೊಡಬೇಕ|
ಶಮೀ ವೃಕ್ಷವೆಂದರೆ ಬನ್ನಿಯ ಮರ. ದಸರೆಯ ಹತ್ತು ದಿನಗಳೂ ನಾರಿಯರಿಂದ ಪೂಜೆಗೊಳಪಡುವ ಬನ್ನಿಮರ. ನಾಡ ಜನರಿಗೆ ಶುಭದ ಸಂಕೇತ. ಹತ್ತು ದಿನವೂ ಸರ್ಯೋದಯದ ಮುನ್ನ ನಾರಿಯರು ಬನ್ನಿಗಿಡವನ್ನು ಭಕ್ತಿಯಿಂದ ಪೂಜಿಸಿ ತಮಗಿಷ್ಟವಾದ ವರವನ್ನು ಪಡೆಯುತ್ತಾರೆ. ಜನಪದರಿಗೆ ಬನ್ನಿಮರ ದೈವಸ್ವರೂಪ. ಸಾಕ್ಷಾತ್ ಆದಿಶಕ್ತಿಯ ಅವತಾರ. ಪ್ರತಿ ಹಳ್ಳಿಗಳಲ್ಲಿಯ ಬನ್ನಿಮರವನ್ನು ಶ್ರದ್ಧೆ ಭಕ್ತಿಯಿಂದ ನೆಡವುದರೊಂದಿಗೆ ಪೂಜಿಸುತ್ತಾರೆ. ವಿಜಯದಶಮಿ ದಿನದಂದು ವಿಶೇಷವಾದ ಪೂಜೆಮಾಡಿ, ಮನೆಗೆ ಬನ್ನಿ ಮರದೆಲೆಗಳನ್ನು ತರುತ್ತಾರೆ. ಇದನ್ನೆ ಬನ್ನಿ ಮುಡಿಯುವುದು ಎನ್ನಲಾಗುತ್ತದೆ. ಬನ್ನಿ ಮರದೆಲೆಗಳು ಬರೀ ಎಲೆಗಳಲ್ಲ ಅವು ಬಂಗಾರದೆಲೆಗಳು. ಅಂದು ಬನ್ನಿ ಜನಪದರಲ್ಲಿ ಹೊನ್ನಾಗಿ ಬಳಕೆಯಾಗಲ್ಪಡುತ್ತದೆ.
ಬನ್ನೀಯ ಮುಡಿಯಾಕ, ಸಣ್ಣ ಸೊಸಿಮನಿಯಾಗ
ಕನ್ನುö್ಯಳ್ಳ ಮಗ ಮಂದ್ಯಾಗ | ಮುಡಿದಾರ
ಹೊನ್ನ ತುಂಬ್ಯಾರ ಉಡಿಯಾಗ |
ಚಿಕ್ಕವರಿಂದ ದೊಡ್ಡವರವರೆಗೆ ಬಹುಸಡಗರ, ಸಂಭ್ರಮದಿAದ ಆಚರಿಸಲ್ಪಡುವ ಹಬ್ಬ ವಿಜಯದಶಮಿ. ಪೌರಾಣಿಕವಾಗಿ, ಐತಿಹಾಸಿಕವಾಗಿ ಎನೇ ಹಿನ್ನಲೆಯಿದ್ದರೂ ನಾಡಿನಾದ್ಯಂತ ಅದ್ಧೂರಿ ಆಚರಣೆ. ಅಬ್ಬರದ ಪಲ್ಲಕ್ಕಿ ಉತ್ಸವ, ಊರ ಮುಂದಿನ ಬನ್ನಿ ಮರದ ಪೂಜೆಯು ನೆರವೇರುತ್ತದೆ. ಬನ್ನಿ ಮುಡಿದು ಮನೆಗೆ ಮರಳುವ ಗಂಡಸರಿಗೆ ಆರತಿಯನ್ನು ಬೆಳಗುತ್ತಾರೆ. ಇವು ನಾಡಿನ ಪ್ರತಿಯೊಂದು ಹಳ್ಳಿಗಳಲ್ಲಿ ಹಬ್ಬದ ದಿನದಂದು ಕಂಡುಬರುವ ಸಾಮಾನ್ಯ ದೃಶ್ಯಗಳಾಗಿವೆ.
ಬನ್ನಿ ಮುಡಿಯೋಣ ಹ್ಯಾಂವ ಮರೆಯೋಣ
ಬನ್ನಿ ಜೀವಾತ್ಮದಂತೆ ನಾವು | ನೀವು
ಬನ್ನಿ ಬಂಗಾರದ್ಹAಗ ಇರೋಣ |
ಅಂದು ಸಂಜೆಯಾದೊಡೆ ದೇವರಿಗೆ ಬನ್ನಿಯನ್ನು ಅರ್ಪಿಸಿದ ಜನರು ಪ್ರತಿಯೊದು ಮನೆಮನೆಗೂ ತೆರಳಿ ‘ನಾವು-ನೀವು ಬನ್ನಿ ಬಂಗಾರದ್ಹAಗ ಇರೋಣ’ ಎಂದು ಬನ್ನಿ ಕೊಟ್ಟು ಹಾರೈಸುತ್ತಾರೆ. ಹಿರಿಯರಾದರೆ ಆಶೀರ್ವಾದ ಪಡೆಯುವುದು. ಕಿರಿಯರಾದರೆ ಶುಭ ಕೋರುವುದು ನಾಡಜನರ ಸಂಪ್ರದಾಯ ಎಷ್ಟೋ ದಿನಗಳ ವೈಷಮ್ಯ, ಹಗೆತನ, ಸಿಟ್ಟುಗಳೆಲ್ಲವುಗಳಿಗೆ ಮೋಕ್ಷ ಸಿಗುವುದು ಇದೇ ದಿನದಂದು. ಅಂದು ಕಹಿದಿನಗಳನ್ನು ಮರೆತು ಪರಸ್ಪರ ಒಂದಾಗಿ ‘ಬಂಗಾರ’
(ಬನ್ನಿ) ವಿನಿಮಯ ಮಾಡಿಕೊಳ್ಳುತ್ತಾರೆ. ಆಧುನಿಕ ಯುಗದಲ್ಲಿ ಬದುಕುತ್ತಿರುವ ನಮಗೆ ಹಿಂದಿನ ಆಚರಣೆಗಳೂ ಆಚಾರದಲ್ಲಿ ಮಾತ್ರ ಉಳಿದಿವೆ. ಆಚರಣೆಗೆ ಬರುತ್ತಿಲ್ಲ. ಕೆಲವೊಮ್ಮೆ ಬಂದರೂ ನಿಷ್ಕಾಳಜಿ. ನಾವಿಂದು ಹಿರಿಯರ ಒತ್ತಾಯಕ್ಕೂ ಸಮುದಾಯದ ಹೆದರಿಕೆಗೂ ಆಚರಿಸುತ್ತಿದ್ದೇವೆ. ಆದರೆ ರೂಢಿ-ಸಂಪ್ರದಾಯ-ಆಚಾರಗಳನ್ನು ಆಚರಣೆಗೆ ತರುವಲ್ಲಿ ಎಡುವುತ್ತಿದ್ದೇವೆ. ಮಧುರವಾದ ಬಾಂಧವ್ಯಗಳನ್ನು ಬೆಸೆವ ನೆಲೆಯಲ್ಲಿಯೂ ಇಂತಹ ಹಬ್ಬಗಳನ್ನು ಆಚರಿಸಲಾಗುತ್ತದೆ.
ಡಾ. ಶಿವಾನಂದ ಬ. ಟವಳಿ
ಸಹಾಯಕ ಪ್ರಾಧ್ಯಾಪಕರು, ಭಾಷಾ ವಿಭಾಗ,
ಕ್ರೆöÊಸ್ಟ್ ವಿಶ್ವವಿದ್ಯಾಲಯ, ಬೆಂಗಳೂರು-೨೯
.
.jpg)

.jpg)